Monday 4 March 2024

ಸ್ವರ್ಣ ಜ್ಯೋತಿ ಪಬ್ಲಿಕ್ ಶಾಲೆಯ ಕಲಾ ವೈಭವ -2024

 ಸ್ವರ್ಣ ಜ್ಯೋತಿ ಪಬ್ಲಿಕ್  ಶಾಲೆಯ ಕಲಾ ವೈಭವ -2024


ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಸ್ವರ್ಣ ಜ್ಯೋತಿ ಪಬ್ಲಿಕ್  ಶಾಲೆಯ ಕಲಾ ವೈಭವ -೨೦೨೪ನ್ನು ಶಾಲೆಯ ಮುಖ್ಯಸ್ಥರಾದ ಶ್ರೀ ವಿನೋದ್ ಹಾಗೂ ಶ್ರೀಮತಿ ಭವ್ಯ ವಿನೋದ್ ರವರು ಜ್ಯೋತಿ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.


ಈ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿ0ದ ನಡೆಯಿತು ಹಾಗೂ ಪ್ರೇಕ್ಷಕರಿಗೆ ಚಿಣ್ಣರ ಲೋಕವೇ ಧರೆಗಿಳಿದಂತಿತ್ತು.ಪ್ರತಿಯೊ0ದು ಮಕ್ಕಳನ್ನು ಸಹ ಶಿಕ್ಷಕರು ಸುಂದರವಾಗಿ ಶೃಂಗರಿಸಿದ್ದರು. ಮಗುವಿನ ಜನನದಿಂದ ಹಿಡಿದು ಅವರ ಬೆಳವಣಿಗೆಯ ಪ್ರತಿಯೊಂದು ಮೆಟ್ಟಿಲ್ಲನ್ನು ನಾಟಕದ ಮುಖಾಂತರ ಎಲ್ಲರ ಪ್ರೇಕ್ಷಕರ ಮನಮುಟ್ಟಿಸಿದರು. ಹಾಗೆಯೇ ಪುಟ್ಟ ಮಕ್ಕಳಲ್ಲಿ ದೇಶದ ಏಳಿಗೆಗೆ ಕಾರಣರಾದ ಸೈನಿಕ , ಪೋಲೀಸ್, ರೈತ, ಡಾಕ್ಟರ್ ಮತ್ತು ಶಿಕ್ಷಕರ ಬಗ್ಗೆ ಮಾಡಿದ ನಾಟಕ ಪ್ರತಿಯೊಬ್ಬ ಪೋಷಕರ ಮನಕಲಕಿತು.


ತಂದೆ ಹಾಗೂ ತಾಯಿಯ ಬಗ್ಗೆ ಮಾಡಿದ ನೃತ್ಯ ಶಿಕ್ಷಕರಿಂದ ಹಿಡಿದು ಅಲ್ಲಿ ನೆರೆದವರ ಕಣ್ಣಲ್ಲಿ ಕಂಬನಿ ತರಿಸಿತ್ತು. ಮಕ್ಕಳ ಪ್ರತಿಯೊಂದು ನೃತ್ಯವನ್ನು ಶಿಕ್ಷಕರು ಅರ್ಥಪೂರ್ಣವಾಗಿ ನಿರೂಪಿಸಿದ್ದರು. ಇದೇ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರು ಮಾತನಾಡಿ ಮಕ್ಕಳ ಬೆಳವಣಿಗೆಯ ಬಗ್ಗೆ ಪೋಷಕರಿಗೆ ತಿಳಿಸಿದರು. ಪೋಷಕರಿಗೆ ಶಾಲೆಯ ಬಗ್ಗೆ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು. ತಮ್ಮ ಮಕ್ಕಳ ಈ ಪ್ರತಿಭೆ ಕಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಾಲಕ-ಪೋಷಕರು ಸಂತಸ ಪಟ್ಟರು. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು. ಅಂತಿಮವಾಗಿ ಶಾಲೆಯ ಮುಖ್ಯೋಪಾಧ್ಯಯರಿಂದ ಅಲ್ಲಿ ನೆರೆದಿದ್ದ ಪೋಷಕರಿಗೆ ಹಾಗೂ ಮಕ್ಕಳಿಗೆ ಧನ್ಯವಾದ ತಿಳಿಸಿ ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.


ವರದಿ : ಶಾರದ .ಎಂ


ಕನಸಿನ ಭಾರತ


https://kanasinabharatha.net/?p=83225